ಮಲಯಾಳ ಲಿಪಿ-
ಬ್ರಾಹ್ಮೀ ಲಿಪಿಯಿಂದ ಉಗಮಿಸಿದ ವಟ್ಟೆ¿ುತ್ತು (ವೃತ್ತಲಿಪಿ) ಎಂಬುದೇ ಮಲಯಾಳ ಭಾಷೆಯ ಪ್ರಾಚೀನ ಲಿಪಿ. ಇದನ್ನು ಎಂಟನೆಯ ಶತಮಾನದ ಉತ್ತರಾರ್ಧದಲ್ಲಿ ರಾಜ್ಯವಾಳಿದ ಪಾಂಡ್ಯರಾಜ ಜಟಿಲವರ್ಮನ ಕಾಲದ ಒಂದು ಶಿಲಾಶಾಸನದಲ್ಲಿ ಬಳಸಲಾಗಿದೆ. ಹದಿನೈದನೆಯ ಶತಮಾನದಿಂದ ಈ ಲಿಪಿಯ ಬಳಕೆ ಕಡಿಮೆಯಾದರೂ ಹದಿನೆಂಟನೆಯ ಶತಮಾನದ ತನಕ ಇದನ್ನು ಬಳಸುತ್ತಿದ್ದ ಸಾಹಿತ್ಯಜೀವಿಗಳು ಇದ್ದರು. ವಟ್ಟೆ¿ುತ್ತಿನ ಉಗಮ ವಿಕಾಸದ ಬಗ್ಗೆ ಸರಿಯಾದ ಮಾಹಿತಿ ಸಿಕ್ಕುವುದಿಲ್ಲ. ಬುಹ್ಲರ್ ಎಂಬಾತ ಇದನ್ನು ತಮಿಳು ಲಿಪಿಯ ಮೋಡೀ ರೂಪವೆಂದು ಅಭಿಪ್ರಾಯಪಟ್ಟರೆ ಬರ್ಸಲ್ ಎಂಬಾತ ಈ ಲಿಪಿ ಪೋನೀಷ್ಯನ್ ಮತ್ತು ಅರಾಮಿಕ್‍ನಿಂದ ಬಂದಿದೆಯೆಂದು ಅಭಿಪ್ರಾಯಪಟ್ಟಿದ್ದಾನೆ. ಗೋಪಿನಾಥರಾವ್ ಎಂಬುವರು ಇದು ಬ್ರಾಹ್ಮೀ ಲಿಪಿಯಿಂದ ಹುಟ್ಟಿದ್ದು ಎಂಬುದಾಗಿ ಊಹಿಸಿದ್ದಾರೆ. ಇವರ ಊಹೆಯನ್ನೇ ಅನೇಕರು ಅನುಮೋದಿಸಿದ್ದಾರೆ.

ವಟ್ಟೇ¿ುತ್ತಿನಿಂದ ಕಾಲಕ್ರಮೇಣ ಕೋಲೆ¿ುತ್ತು ಎನ್ನುವ ಲಿಪಿ ಹುಟ್ಟಿಕೊಂಡಿತು. ಇದನ್ನು ಬರೆಯಲು ಕೋಲನ್ನು (ಕಡ್ಡಿಯನ್ನು) ಬಳಸುತ್ತಿದ್ದುದರಿಂದ ಕೋಲೆ¿ುತ್ತು ಎಂಬ ಹೆಸರು ಬಂದಿದೆ. ಅಲ್ಲದೆ ಈ ಲಿಪಿ ಕೋಲಿನ ಅಕಾರದಲ್ಲೇ ಇತ್ತು. ಸಂವೃತೋಕಾರ, ಏ ಕಾರ, ಓ ಕಾರಗಳಿಗೆ ಪ್ರತ್ಯೇಕ ಚಿಹ್ನೆಗಳಿದ್ದುದೇ ಈ ಲಿಪಿಯ ವಿಶೇಷತೆ ಎನ್ನಬಹುದು. ಈ ಲಿಪಿಗೆ ಕೊಚ್ಚಿನ್‍ನಲ್ಲೂ ಮಲಬಾರಿನಲ್ಲೂ ಹೆಚ್ಚು ಪ್ರಾಶಸ್ತ್ಯವಿತ್ತು.

ವಟ್ಟೆ¿ುತ್ತಿನಿಂದ ಹುಟ್ಟಿದ ಮತ್ತೊಂದು ಲಿಪಿಗೆ ಮಲಯಾಣ್ಮ ಎಂದೂ ಹೆಸರು. ಇದು ತಿರುವನಂತಪುರದಿಂದ ದಕ್ಷಿಣಕ್ಕಿರುವ ಪ್ರದೇಶಗಳಲ್ಲಿ ಹೆಚ್ಚು ಪ್ರಚಲಿತವಾಗಿತ್ತು.

ಮೇಲೆ ಹೇಳಿರುವ ಮೂರು ಲಿಪಿಗಳಲ್ಲಿಯೂ ಅನೇಕ ಕೊರತೆಗಳಿದ್ದವು. ವಟ್ಟೆಹುತ್ತು ಕೇರಳ ರಾಜ್ಯದ ಎಲ್ಲ ಭಾಗಗಳಲ್ಲಿ ಬಳಕೆಯಲ್ಲಿದ್ದರೂ ಏ, ಓ ಮುಂತಾದ ಅಕ್ಷರಗಳು ಅದರಲ್ಲಿ ಇರಲಿಲ್ಲ. ಪ್ರಾದೇಶಿಕತೆಯಿಂದಾಗಿ ಕೋಲೆಹುತ್ತಿನಲ್ಲೂ

ಅ	ಆ	ಇ	ಈ	ಉ
ಊ	ಋ	ಎ	ಏ	ಐ
ಒ	ಓ	ಔ	ಅಂ	ಆಃ
ಕ	ಖ	ಗ	ಘ	ಙ
ಚ	ಛ	ಜ	ಝ	ಞ
ಟ	ಠ	ಡ	ಢ	ಣ
ತ	ಥ	ದ	ಧ	ನ
ಪ	ಫ	ಬ	ಭ	ಮ
ಯ	ರ	ಲ	ವ	ಶ
ಷ	ಶ	ಹ	ಳ	¿	¾	
			
ಅನೇಕ ವ್ಯತ್ಯಾಸಗಳಿದ್ದುವು. ಮಲಯಾಣ್ಮದಲ್ಲಿ ತಮಿಳು ರೂಪ ಹೆಚ್ಚಾಗಿತ್ತು. ಅಲ್ಲದೆ ಅದರ ಕೆಲವು ಅಕ್ಷರಗಳು ಬರೆವಣಿಗೆ ಸುಲಭವಾಗಿರಲ್ಲಿಲ್ಲ. ಈ ಮೂರು ಲಿಪಿಗಳಲ್ಲೂ ಸಂಯುಕ್ತಾಕ್ಷರಗಳನ್ನು ಬರೆಯುವ ಸೌಕರ್ಯಗಳು ಇರಲಿಲ್ಲ. ನಂಬೂದಿರಿ ಬ್ರಾಹ್ಮಣರ ಆಡುಮಾತಿನ ಸಂಪರ್ಕದಿಂದಾಗಿ ಮಹಾಪ್ರಾಣ, ಊಷ್ಮ ಮುಂತಾದ ಧ್ವನಿಗಳು ಬಳಕೆಗೆ ಬಂದವು. ಇವನ್ನು ಬರೆಯಲು ಈ ಲಿಪಿಗಳಲ್ಲಿ ಪ್ರತ್ಯೇಕ ಚಿಹ್ನೆಗಳಿರಲ್ಲ. ಈ ಎಲ್ಲ ಕೊರತೆಗಳನ್ನು ಪರಿಹರಿಸಿಕೊಳ್ಳಲು ಕೃತಿಕಾರರು ಗ್ರಂಥಾಕ್ಷರಗಳನ್ನು (ಗ್ರಂಥಲಿಪಿ) ಬಳಸಲು ತೊಡಗಿದರು. ಹೀಗೆ ಗ್ರಂಥಾಕ್ಷರ ಮತ್ತು ವಟ್ಟೆ¿ುತ್ತಿನ ಮಿಶ್ರರೂಪದಿಂದ ಆಧುನಿಕ ಮಲಯಾಳ ಲಿಪಿ ಬಳಕೆಗೆ ಬಂತು. ಇದರಲ್ಲಿ ಸಂಸ್ಕøತವರ್ಣಗಳನ್ನೂ ಮಲಯಾಳ ವರ್ಣಗಳನ್ನೂ ಸಂಧ್ಯಕ್ಷರಗಳನ್ನೂ ಬರೆಯಲು ಅವಕಾಶವಿದೆ.

ಗ್ರಂಥಲಿಪಿ ಕ್ರಿ.ಶ. ಸುಮಾರು ಏಳನೆಯ ಶತಮಾನಕ್ಕಿಂತ ಹಿಂದಿನಿಂದಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಳಕೆಯಲ್ಲಿತ್ತು. ಮಣಿಪ್ರವಾಳ ಸಾಹಿತ್ಯದ ಅವಿರ್ಭಾವದೊಂದಿಗೆ ಈ ಲಿಪಿಗೆ ಸ್ಥಾನ ಸಿಕ್ಕಿತು. ತರುವಾಯ ಇದು ಮಲಯಾಳ ಲಿಪಿ ವ್ಯವಸ್ಥೆಯನ್ನೇ ಮಾರ್ಪಾಟುಗೊಳಿಸಿತು. ಒಂಬತ್ತನೆಯ ಶತಮಾನದ ಹೊತ್ತಿಗೆ ಈ ಲಿಪಿ ಒಂದು ವ್ಯವಸ್ಥೆಗೆ ಬಂದದ್ದರಿಂದ ಆರ್ಯ ಎ¿ುತ್ತು ಎಂಬ ಹೆಸರಿನಿಂದ ಮಲಯಾಳ ಲಿಪಿಯಾಗಿ ಬಳಕೆಗೆ ಬಂತು ಎಂಬುದಾಗಿ ಮಲಯಾಳ ವಿದ್ವಾಂಸರ ಪ್ಯೆಕಿ ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಆಧುನಿಕ ಮಲಯಾಳ ಲಿಪಿಯಲ್ಲಿ, ಶಬ್ದಾಂತ್ಯದಲ್ಲಿ ಬರುವ ಉಕಾರವನ್ನು ಸೂಚಿಸಲು U ಚಿಹ್ನೆಯನ್ನು ಬಳಸುತ್ತಾರೆ. ಋ ಎಂಬುದು ಸಂಸ್ಕøತ ಪದಗಳನ್ನು ಬರೆಯಲು ಅಳವಡಿಸಿಕೊಂಡ ಧ್ವನಿ. ಐ ಮತ್ತು ಔ ಎಂಬುವು ಸಂಯುಕ್ತ ಧ್ವನಿಗಳಾದರೂ ಅವನ್ನು ಪ್ರತಿನಿಧಿಸಲು ಪ್ರತ್ಯೇಕ ಚಿಹ್ನೆಗಳಿವೆ. ಅಂ ಎಂಬುದು ಅ ಕಾರ ಮತ್ತು ಪದಾಂತ್ಯ ಮ ಕಾರದ ಸಂಯುಕ್ತರೂಪ. ಅಃ ಎಂಬುದು ಅ ಕಾರ ಮತ್ತು ವಿಸರ್ಗದ ಸಂಯುಕ್ತರೂಪ. ಇವು ಸಂಸ್ಕøತ ಶಬ್ದಗಳಿಗಾಗಿ ಬಳಕೆಗೊಳ್ಳುವಂಥವು. ಅ ಕಾರದ (ಶಕಟರೇಫದ) ದ್ವಿತ್ವರೂಪ ವತ್ಸ್ರ್ಯ ಸ್ಪರ್ಶ ಧ್ವನಿಯನ್ನು ಪ್ರತಿನಿಧಿಸುತ್ತದೆ. ವತ್ಸ್ರ್ಯ ನ ಕಾರಕ್ಕೆ ಪ್ರತ್ಯೇಕ ಚಿಹ್ನೆ ಇಲ್ಲದ್ದರಿಂದ ದಂತ್ಯ ನ ಕಾರವೇ ಬಳಕೆಯಾಗುತ್ತದೆ. ಮಹಾಪ್ರಾಣಯುಕ್ತ ಸ್ಪರ್ಶ ಧ್ವನಿಗಳು ಮಲಯಾಳ ಭಾಷಾ ಜಾಯಮಾನಕ್ಕೆ ಸೇರದಿದ್ದರೂ ಸಂಸ್ಕøತ ಧ್ವನಿಗಳಿಗಾಗಿ ವರ್ಣಮಾಲೆಯಲ್ಲಿ ಸೇರಿವೆ.
  (ಸಿ.ಎ.; ಸಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ